ನವದೆಹಲಿ: ಇದು ಮಧ್ಯಂತರ ಬಜೆಟ್ ಅಲ್ಲ. ಪೂರ್ಣ ಪ್ರಮಾಣದ ಬಜೆಟ್ ಮತ್ತು ಲೋಕಸಭೆ ಚುನಾವಣಾ ಪ್ರಚಾರದ ಭಾಷಣ ಎಂದು ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಶುಕ್ರವಾರ ಟೀಕಿಸಿದ್ದಾರೆ.
ಕೇಂದ್ರ ಬಜೆಟ್ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಿದಂಬರಂ ಅವರು, ಬಜೆಟ್ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳುವುದಾದರೆ ಖಾತೆಗಳಲ್ಲಿ ಮತ ಅಲ್ಲ, ಮತಗಳಿಗಾಗಿ ಖಾತೆ' ಎಂದು ಲೇವಡಿ ಮಾಡಿದ್ದಾರೆ.
ಮಧ್ಯಂತರ ವಿತ್ತ ಸಚಿವ ಪಿಯೂಷ್ ಗೋಯಲ್ ಅವರು ಅತಿ ಉದ್ದದ ಮಧ್ಯಂತ ಬಜೆಟ್ ಭಾಷಣ ಮಾಡುವ ಮೂಲಕ ನಮ್ಮ ತಾಳ್ಮೆ ಪರೀಕ್ಷೆ ಮಾಡಿದರು. ಇದು ಮಧ್ಯಂತರ ಬಜೆಟ್ ಅಲ್ಲ. ಪೂರ್ಣ ಪ್ರಮಾಣದ ಬಜೆಟ್ ಮತ್ತು ಚುನಾವಣಾ ಪ್ರಚಾರದ ಭಾಷಣ ಎಂದರು.
ಇದಕ್ಕು ಮುನ್ನ, ಮೋದಿ ಸರ್ಕಾರದ ಕೊನೆ ಬಜೆಟ್ನಲ್ಲಿ ಕಾಂಗ್ರೆಸ್ ಐಡಿಯಾವನ್ನೇ ಕಾಪಿ ಮಾಡಲಾಗಿದೆ. ದೇಶದ ಸಂಪನ್ಮೂಲಗಳ ಮೊದಲ ಹಕ್ಕುದಾರ ರೈತ ಎಂಬ ಕಾಂಗ್ರೆಸ್ ಘೋಷಣೆಯನ್ನು ಹಂಗಾಮಿ ಹಣಕಾಸು ಸಚಿವರು ಕಾಪಿ ಮಾಡಿದ್ದಕ್ಕೆ ಧನ್ಯವಾದ ಎಂದು ಚಿದಂಬರಂ ಟ್ವೀಟ್ ಮಾಡಿದ್ದರು.